Saturday, March 07, 2009

ನಕ್ಸಲರ ಬಹಿರಂಗ ಸಭೆ.

ಶೃಂಗೇರಿ ತಾಲ್ಲುಕಿನ ನೆಮ್ಮಾರು ಗ್ರಾಮ ಪಂಚಾಯ್ತಿಯ ಬುಕ್ಕಡಿಬೈಲಿನಲ್ಲಿ ಗುರುವಾರ ರಾತ್ರಿ ಬಿ.ಜಿ.ಕೃಷ್ಣಮೂರ್ತಿ ನೇತ್ರತ್ವದ ನಕ್ಸಲರ ತಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಹಿರಂಗ ಸಭೆ ನಡೆಸಿದೆ.
ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆ ಆರಂಭಗೊಂಡ ನಂತರ ಇದೇ ಪ್ರಥಮ ಬಾರಿಗೆ ನಕ್ಸಲರು ಇಂತಹ ಬಹಿರಂಗ ಸಭೆ ನಡೆಸಿದ್ದು, ಇದರ ಮೂಲಕ ಮಲೆನಾಡು ಭಾಗದಲ್ಲಿನ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದಂತಾಗಿದೆ.
ಗುರುವಾರ ಸಂಜೆ ೬.೩೦ ರ ಸುಮಾರಿಗೆ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ , ಮಂದಗಾರು ಲತಾ, ಹೊಸಗದ್ದೆ ಪ್ರಭಾ ಒಳಗೊಂಡಂತೆ ೧೩ ಜನರ ಶಸ್ತ್ರಸಜ್ಜಿತ ತಂಡ ಬುಕ್ಕಡಿಬೈಲಿಗೆ ಭೇಟಿ ನೀಡಿ ಅಲ್ಲಿನ ಮನೆಮನೆಗೆ ತೆರಳಿ ಸಭೆಗೆ ಬರುವಂತೆ ಸೂಚಿಸಿದ್ದಾರೆ. ನಂತರ ಆರಂಭಗೊಂಡ ಸಭೆಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಮಾತನ್ನಾಡಿ ಪಿ.ವಿ ನರಸಿಂಹರಾವ್ ಕಾಲದಿಂದ ಆರಂಭಗೊಂಡು ಈಗಿನವರೆಗಿನ ಕೇಂದ್ರ ಸರಕಾರದ ನೀತಿಗಳನ್ನು ಬಲವಾಗಿ ಖಂಡಿಸುವುದರೊಂದಿಗೆ ರಾಜ್ಯ ಸರಕಾರದ ನಿಲುವುಗಳ ವಿರುದ್ಧವೂ ಕಿಡಿಕಾರಿದ್ದಾಗಿ ತಿಳಿದುಬಂದಿದೆ.
ಸಭೆಯಲ್ಲಿ ಇದರ ಕುರಿತು ಕ್ರಾಂತಿಗೀತೆಗಳನ್ನು ಹಾಡಿ, ಕರಪತ್ರಗಳನ್ನು ಹಂಚಲಾಗಿದೆ. ತಮ್ಮ ಹೋರಾಟವನ್ನು ಬೆಂಬಲಿಸುವಂತೆ ಕರೆನೀಡಿ ಹಳ್ಳಿಬಿದರಗೊಡಿನಲ್ಲಿ ಇತ್ತೀಚಿಗೆ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪೂರ್ಣ ವಿವರಳಿಗೆ ಇಲ್ಲಿ ಕ್ಲಿಕ್ ಮಾಡಿ.

No comments:

ChatBox

Related Posts with Thumbnails