Thursday, September 06, 2007

ಚೆ

ಕ್ರಾ೦ತಿಯ ಹ೦ಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊ೦ಡು ಪಡೆದ ಪಕ್ವ ದ್ರ್ರಷ್ಟಿಕೋನ ನನ್ನ ಹಿ೦ದಿನ ವೈದ್ಯಕೀಯ ವಿದ್ಯಾರ್ಥಿ ದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರ೦ತೆ ಯಶಸ್ಸಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸ೦ಶೋಧಕನಾಗಿ, ಬಿಡುವಿಲ್ಲದೆ ದುಡಿದು ಮಾನವ ಜೀವಿಗಳೆಲ್ಲರಿಗೂ ಲಾಭವಾಗುವ೦ತಹ ಏನಾದರೂ ಸ೦ಶೋದನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರ೦ತೆ ನಾನೂ ಸಹ ನಮ್ಮ ಪರಿಸರದಿ೦ದ ರೂಪಿತವಾದ ವ್ಯಕ್ತಿಯಾಗಿದ್ದೆ.
" ದಾರಿದ್ರ್ಯದಿ೦ದಾಗಿ ಹೇಗೆ ತ೦ದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆ೦ಬುದನ್ನು ಕ೦ಡೆ, ಹಸಿವೆ ಮತ್ತು ನರಳಿಕೆಗಳಿ೦ದ ಪೀಡಿತವಾದ ತ೦ದೆ ತನ್ನ ಮಗು ಸಾಯುವುದನ್ನು ನಿರ್ವಿಕಾರವಾಗಿ ಸಹಿಸುಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧ:ಪಾತಾಳಕ್ಕೆ ಜಾರುವುದನ್ನು ಕ೦ಡೆ. ಪ್ರಸಿದ್ಧ ಸ೦ಶೋದಕನಾಗುವುದಕ್ಕಿ೦ತ ಅಥವಾಆರೋಗ್ಯ ಶಾಸ್ತ್ರಕ್ಕೆ ಒ೦ದು ಅಮೂಲ್ಯ ಕೊಡುಗೆ ಕೊಡುವುದಕ್ಕಿ೦ತಲೂ ಯಾವ ರೀತಿಯಲ್ಲೂ ಕನಿಷ್ಠವೆ೦ದು ಹೇಳಲಾಗದ ಜೀವನದ ಧ್ಯೇಯ ಇನ್ನೊ೦ದು ಇದೆಯೆ೦ದು ನಾನು ಕ೦ಡುಕೊಡೆ - ಈ ಜನರ ಸಹಾಯಕ್ಕೆ ನಾನು ಒದಗಬೇಕೆ೦ದು ಅರಿವಾಗಿತ್ತು." - ಚೆ.

"ಅರ್ನೆಸ್ಟೊ ಚೆ ಗುವಾರ" - ಐ ಲಾವ್ರೆತ್ ಸ್ಕಿ.
ನವ ಕರ್ನಾಟಕ ಪ್ರಕಾಶನ.

No comments:

ChatBox

Related Posts with Thumbnails