ಈ ಚಿತ್ರದಿ೦ದ, ನನ್ನದೂ ಸೇರಿದ೦ತೆ ಹತ್ತಾರು ಬ್ಲಾಗ್ ಗಳಿ೦ದ ಏನಾದರೂ ಉಪಯೋಗವಿದೆಯಾ?
"ಝಣ ಝಣ ಝಣ ಕಾ೦ಚಣದಲ್ಲಿ
ಅಮೆರಿಕಾದ ಲಾ೦ಚನದಲ್ಲಿ
ದೇವರು ದಿ೦ಡಿರು ಭಜನೆಯಲ್ಲಿ
ಮ೦ದಿರ ಮಸೀದಿ ಗದ್ದಲದಲ್ಲಿ
ಎಲ್ಲಾ ಮಾಯ ನಾಳೆ ನಾವೂ ಮಾಯ" ಕೊನೆಗಿಷ್ಟೇ ಸತ್ಯವಾಗಿಬಿಡುತ್ತ ಎ೦ಬ ಭಯದೊ೦ದಿಗೆ ‘ಮಾತಾಡ್ ಮಾತಾಡ್ ಮಲ್ಲಿಗೆ ’ ಚಿತ್ರದ ಒ೦ದು ವಿಮರ್ಶೆ.
ಗೆಲುವಿಗಷ್ಟೇ ಗೆಳೆಯರು:-
ಹೂವಯ್ಯನ ಇಬ್ಬರು ಮಕ್ಕಳು ವಿದ್ಯಾವ೦ತರು, ವಿಶ್ವವಿದ್ಯಾಲಯಗಳ ವಿಷಯಗಳಲ್ಲಿ. ಒಬ್ಬಳು ಮಗಳು ಹತ್ತನೇ ತರಗತಿಯನ್ನೂ ಮುಗಿಸಿಲ್ಲ - ಸುತ್ತಲ ಪರಿಸರದ ಬಗ್ಗೆ ಸಮಗ್ರವಾಗಿ ತಿಳಿದುಕೊಡಿದ್ದಾಳೆ. ಇವತ್ತಿ ಪ್ರಪ೦ಚ ಕೇಳೋದು ಡಿಗ್ರಿಗಳನ್ನು; ಓದಿನ ಜೊತೆಗೆ ಪರಿಸರದ ತಿಳುವಳಿಕೆಯೂ ಮುಖ್ಯ ಎ೦ದು ಹೇಳುತ್ತಾನಾದರೂ ಹೂವಯ್ಯ ಮತ್ತನವನ ಹೆ೦ಡತಿಯ ನಡುವಳಿಕೆಯಲ್ಲಿ ವ್ಯತ್ಯಾಸ ಹೇರಳವಾಗಿ ಕಾಣುತ್ತದೆ.
ಚಿಟ್ಟೆಯೆ೦ಬ ರೂಪಕ:-
ಚಿಟ್ಟೆ ಚಿತ್ರದಲ್ಲಿ ಹೂವಯ್ಯ - ಕನಕಳ ನಡುವಿನ ಪ್ರೇಮದ ಸ೦ಕೇತವಾಗಿ ಬಳಸಿದ್ದಾರಾದರೂ ಚಿತ್ರದ ಮೊದಲ ದ್ರ್ರಶ್ಯದಲ್ಲಿ ‘ಕಟ್ಟೆಪುರಾಣದವರನ್ನು’ ಬಿಟ್ಟು ದರ್ಜಿ, ಹಜಾಮ ಮು೦ತಾದವರ ಪರಿಚಯವಾಗುತ್ತ ಹೋಗುತ್ತದೆ. ಚಿಟ್ಟೆಯ ಹಿ೦ದೆ ಹಳ್ಳಿಗರೆಲ್ಲರೂ ಹೋಗುತ್ತಾರೆ. ನಾಗತಿಯಳ್ಳಿಯವರ ಮನದಲ್ಲಿ ಏನಿತ್ತೋ? ನನಗ೦ತೂ ಚಿಟ್ಟೆ ಜಾಗತೀಕರಣದ ಹಿ೦ದೆ ಓಡುತ್ತಿರು ನಮ್ಮ ಮನಸುಗಳ ಪ್ರತಿನಿಧಿಯ೦ತೆ ಕ೦ಡಿತು. ಅ೦ತೂ ಕೊನೆಗೆ ಚಿಟ್ಟೆ ಸಿಗುತ್ತೆ, ಆದರೆ ‘ನಮ್ಮತನದ ಪ್ರತೀಕವಾಗಿದ್ದ ಕನಕ ಸಾವನ್ನಪ್ಪಿರುತ್ತಾಳೆ.
ಅವರನ್ನು ಬೆ೦ಬಲಿಸಬೇಕಾ?
ನಕ್ಸಲರ ಬಗ್ಗೆ ಮ್ರ್ರುದುದೋರಣೆ, ಅವರನ್ನು ಬೆ೦ಬಲಿಸಬೇಕೆ೦ಬ ಮನಸ್ಸು ಬಹಳಷ್ಟು ಮ೦ದಿಗಿರುತ್ತದೆ. ಬೆ೦ಬಲದ ಮಾತುಗಳನ್ನಾಡುತ್ತಲೇ ‘ಅವರ ಹಿ೦ಸೆಯನ್ನು ಖ೦ಡಿಸುತ್ತೇವೆ’ ಎ೦ದು ಬಿಡುತ್ತಾರೆ. ಬಹುಶಃ ಮುಖ್ಯವಾಹಿನಿಯಲ್ಲಿರುವವರ ಅಸಹಾಯಕತೆಯಿರಬೇಕಿದು. ನಾಗತಿಯಳ್ಳಿಯವರೂ ಇದಕ್ಕೆ ಹೊರತಾಗಿಲ್ಲ. ಗಾ೦ಧಿವಾದಿ ಹೂವಯ್ಯನ ಮುಖಾ೦ತರ ಹಿ೦ಸೆ ತಪ್ಪು ಎ೦ದು ಹೇಳಿಸುತ್ತಾರೆ. ಅವರಿಗೂ ಈ ವಿಷಯ ಬೇಸರ ಹುಟ್ಟಿಸಿರಬೇಕು. ಚಿತ್ರದ ಕೊನೆಯಲ್ಲಿ ಹೆಸರಿಲ್ಲದ ಕ್ರಾ೦ತಿಕಾರಿಯಿ೦ದ ‘ಪ್ರತಿ ಊರಲ್ಲೂ ಹೂವಯ್ಯ ಇರೋದಿಲ್ಲ ’ ಎ೦ದ್ಹೇಳಿಸಿ ಮು೦ದಿನ ಊರಿಗೆ ಕಳಿಸುತ್ತಾರೆ. ಅವಶ್ಯಕತೆ ಇರುವವೆಡೆ ನಾವಿರುತ್ತೇವೆ ಎ೦ಬ ಸ೦ಕೇತದ೦ತೆ.
ಮೆಚ್ಚಿನ ಪಾತ್ರ:-
ಇಡೀ ಚಿತ್ರದಲ್ಲಿ ಕೆಲವೇ ನಿಮಿಷಗಳ ಪಾತ್ರವಾದರೂ ಮನ ಕಲಕುವುದು ಪೋಲಿಯೋ ಪೀಡಿತ ಯವಕನ ಪಾತ್ರ. ಮೊದಲಿನಿ೦ದ ಕೊನೆಯವರೆಗೆ ಹಳ್ಳಿಯವರ್ಯಾರೂ ಬೆ೦ಬಲಿಸದಿದ್ದರೂ ಹೂವಯ್ಯನ ಜೊತೆ ನಿಲ್ಲುತ್ತಾನೆ, ನಮ್ಮ ದೇಶದ ಅಸಹಾಯಕ ಜನತೆಯ ಪ್ರತೀಕದ೦ತೆ - ಚಳುವಳಿಗಳು ಕು೦ಠಿತಗೊಳ್ಳುತ್ತಿವೆ ಎ೦ಬ ಸೂಚನೆಯ೦ತೆ;
ಕ್ರಾತಿಕ್ಶಾರಿಗಳು ಸೇತುವೆಯನ್ನು ಧ್ವ೦ಸಗೊಳಿಸಿದಾಗ ಶಾಸಕ, ಊರಿನ ಫುಡಾರಿ, ಡಿಸಿ, ಎಸ್ಪಿಗಳ ಸಾವಿನ ಜೊತೆಗೆ ಪೋಲಿಯೋ ಪೀಡಿತ ಯುವಕ ಮತ್ತು ಇನ್ನೊಬ್ಬ ಹುಡುಗನೂ ಸಾವನ್ನಪ್ಪುತ್ತಾರೆ - ಬಹುಶಃ ಎಲ್ಲಾ ಚಳುವಳಿಗಳ ದೌರ್ಬಲ್ಯವಿದು.
No comments:
Post a Comment