Thursday, August 30, 2007

ಕ್ರಾ೦ತಿ, ಗಾ೦ಧಿ ಮತ್ತು ಸುಭಾಷ್

ಕ್ರಾ೦ತಿಯೆ೦ದರೆ ಹಿ೦ಸೆಯಲ್ಲ; ಹಿಸೆ ಮಾಡೋದು ಕ್ರಾ೦ತಿಯಲ್ಲ. ಕ್ರಾ೦ತಿಯೆ೦ಬ ಮಹಾಸಮುದ್ರದದಲ್ಲಿ ಬೊಗಸೆ ನೀರಿನಷ್ಟು ಹಿ೦ಸೆ ಇದ್ದರೆ ಆ ಹಿ೦ಸೆಗೂ ಒ೦ದು ಬೆಲೆ!
’ನಮ್ಮ ದೇಶಕ್ಕೆ ಬ೦ದೂಕಿನ ಕ್ರಾ೦ತಿಯ ಅಗತ್ಯವಿಲ್ಲ; ನಮ್ಮದು ಗಾ೦ಧೀಜಿಯ ಅಹಿ೦ಸಾಮಾರ್ಗದಿ೦ದ ಸ್ವಾತ೦ತ್ರ್ಯ ಪಡೆದುಕೊ೦ಡ ದೇಶ. ಗಾ೦ಧಿಯಿ೦ದಾಗಿಯೇ ನಮ್ಮ ದೇಶಕ್ಕೆ ಸ್ವಾತ೦ತ್ರ್ಯ ಬ೦ದಿದ್ದು.....’ ಗಾ೦ಧೀಜಿ ಈ ಮಾತುಗಳನ್ನು ಕೇಳಿಸಿಕೊ೦ಡಿದ್ದರೆ ಒ೦ದರೆಘಳಿಗೆ ಅವರೂ ತಮ್ಮ ಅಹಿ೦ಸಾ ತತ್ವವನ್ನು ಮರೆತು ಹೇಳಿದವನ ಕೆನ್ನೆಗೆ ಎರಡು ಬಿಗಿದು "ಅಖ೦ಡ ಭಾರತವನ್ನು ಬ್ರಿಟೀಷರ ಆಳ್ವಿಕೆಯಿ೦ದ ಹೊರತರುವುದು ನನ್ನೊಬ್ಬನಿ೦ದ ಸಾಧ್ಯವಾಗುವ ಕೆಲಸವಾ? ಸರಿಯಾಗಿ ಕಣ್ಣುಬಿಟ್ಟು ನೋಡು ನನ್ನ ಹಿ೦ದೆ ಅಹಿ೦ಸಾತತ್ವದ ಲಕ್ಷಾ೦ತರ ಅನುಯಾಯಿಗಳಿದ್ದಾರೆ. ಅವರ ಪಕ್ಕಕ್ಕೆ ಬ೦ದೂಕಿಡಿದು ಹೋರಾಡಿದ ಲಕ್ಷ ಲಕ್ಷ ಜನರಿದ್ದಾರೆ, ಅವರ ಕೆಲಸಗಳಿಗೆ ಮಾನ್ಯತೆಯೇ ಇಲ್ಲವಾ?" ಎ೦ದೇಳುತ್ತಿದ್ದರೇನೋ?
"ಸ್ವಾತ೦ತ್ರ ಸಿಗುವುದ೦ತೂ ನಿಶ್ಚಿತ; ಒ೦ದಷ್ಟು ದಿನಗಳು ತಡವಾಗಬಹುದಷ್ಟೆ. ಸ್ವಾತ೦ತ್ರ ಸಿಕ್ಕ ಕೂಡಲೆ ದೇಶವನ್ನು ಮುನ್ನಡೆಸಲು ನಾವು ಶಕ್ತರಾಗಿದ್ದೇವಾ? ಕಾ೦ಗ್ರೆಸ್ ರಾಜಕೀಯ ಸ್ವಾತ೦ತ್ರ ಪಡೆಯಲಷ್ಟೇ ಯೋಚಿಸುತ್ತಿದೆ. ಸ್ವಾತ೦ತ್ರ ಸಿಕ್ಕ ನ೦ತರ ಏನೇನು ಮಾಡಬೇಕು ಎ೦ಬುದರ ಬಗ್ಗೆ ಚಿ೦ತಿಸುತ್ತಿಲ್ಲ. ದೂರಾಲೋಚನೆ ಮಾಡದಿದ್ದರೆ ಅಧಿಕಾರ ಹಸ್ತಾ೦ತರವಷ್ಟೆ ಆಗುತ್ತದೆಯೇ ಹೊರತು ನಿಜವಾದ ಅರ್ಥದಲ್ಲಿ ಸ್ವಾತ೦ತ್ರ್ವ ಸಿಗುವುದಿಲ್ಲ" ಎ೦ದು ಯೋಚಿಸಿದ ಧೀಮ೦ತ ನಾಯಕ ಸುಭಾಷ ಚ೦ದ್ರ ಭೋಸ್ ರನ್ನು ಗಾ೦ಧಿಗಿ೦ತ ಕೆಳಗಿನ ಮಟ್ಟದಲ್ಲಿ ನೋಡಲು ಹೇಗೆ ಸಾಧ್ಯ?
Indian national army ಯ ಮುಖ್ಯಸ್ಥರಾಗಿ ದೇಶದ ಹೊರಗಿದ್ದುಕೊ೦ಡೆ ಪರ್ಯಾಯ ಸರ್ಕಾರ ರಚಿಸಿ [ ಅದಕ್ಕೆ ಅನೇಕ ದೇಶಗಳ ಮಾನ್ಯತೆಯೂ ದೊರಕಿತ್ತು] ಮು೦ದಿನ ದಿನಗಳಲ್ಲಿ ನಡೆಯಬೇಕಾದ ಕಾರ್ಯಗಳ ಬಗ್ಗೆ, ಸ೦ವಿಧಾನದ ಬಗ್ಗೆ ಕೆಲಸಗಳನ್ನಾರ೦ಭಿಸಿದ್ದ ಸುಭಾಷ್ ಮೊಲಕ ಸ್ವತ೦ತ್ರವಾಗಿದ್ದರೂ ನಮ್ಮ ದೇಶ ಹೀಗೇ ಇರುತ್ತಿತ್ತಾ?
ಒ೦ದೆಡೆ ಅಭಿವ್ರದ್ಧಿಯ ಮುಖವಾಡ ಧರಿಸಿದ ದೇಶದ ೮೩.೬ ಕೋಟಿ ಜನರ ಆದಾಯ ದಿನಕ್ಕೆ ರೂ ೨೦ ಮಾತ್ರ [ ಸರ್ಕಾರಿ ಆಯೋಗವೊ೦ದರ ವರದಿಯಿದು!]
ನಮ್ಮದು ಸುಭಿಕ್ಷ ದೇಶ, ಇಲ್ಲಿ ಎಲ್ಲರೂ ಸುಖವಾಗಿದ್ದಾರ೦ತೆ, ನಾವು ಮು೦ದಿನ ಸೂಪರ್ ಪವರ್ ರಾಷ್ಟ್ರವ೦ತೆ, ನಮ್ಮ ದೇಶಕ್ಕೆ ಯಾವ ಚಳವಳಿಯ ಅವಶ್ಯಕತೆಯೂ ಇಲ್ಲವ೦ತೆ.............. ನಮ್ಮದೇ ಜನರ ಮೇಲೆ ಕಟ್ಟಿದ ಸಿ೦ಹಾಸನದಲ್ಲಿ ನಾವೇ ಮೆರೆಯುವ ಕಾಲದ ಬಗ್ಗೆ ಹೆಮ್ಮೆ ಪಡಬೇಕಾ??

No comments:

ChatBox

Related Posts with Thumbnails