Wednesday, November 04, 2009

ಪೊಲೀಸನ ಸ್ವಾತಂತ್ರ್ಯ , ಮಹಿಳೆಯರ ಬಿಡುಗಡೆ ಮತ್ತು ಮಾವೋವಾದಿಗಳ ವಿಜಯ.

partho sarathy, sannhati.com
" ಸ್ಟೇಶನ್ ಎದುರಿಗೆ ಏನು ಎದುರು ಅಂತ ನೋಡ್ಲಿಕ್ಕೆ ಹೋಗಿದ್ದೆ. ಪೊಲೀಸರು ಬಂಧಿಸಿದರು" ಮಿಡ್ನಾಪುರ ಸೆಂಟ್ರಲ್ ಜೈಲಿನ ಎದುರು ಇದಿಷ್ಟನ್ನು ಹೇಳುವಾಗ ಶುಭಾರಾಣಿಯ ಕಣ್ಣುಗಳಲ್ಲಿ ನಿರಾದುತ್ತಿತ್ತು.
೨೦ ಅಕ್ಟೋಬರ್ ೨೦೦೯ರನ್ದು ಮಾವೋವಾದಿಗಳು ಸಂಕ್ರೈಲ್ನ ಪೋಲಿಸ್ ಠಾಣೆಯ ಮೇಲೆ ದಾಳಿ ನಡೆಸಿ ಅತಿಂದ್ರನಾಥ್ ದತ್ತಾನನ್ನು ವಶಕ್ಕೆ ತೆಗೆದುಕೊಂಡರು. ಪೋಲಿಸ್ ಕಸ್ಟಡಿಯಿಂದ ಹದಿನಾಲ್ಕು ಜನ ಮಹಿಳೆಯರನ್ನು ಬಿಡುಗಡೆಗೊಳಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಮುಖ್ಯವಾಹಿನಿಗಳಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆಯೇ ನಡೆಯಿತು, ಕಂದಹಾರ್ ವಿಮಾನ ಅಪಹರಣಕ್ಕೆ ಹೋಲಿಸಿಯು ವಾದಗಳು ನಡೆದವು.
ಮಾವೋವಾದಿಗಳ ಬೇಡಿಕೆಯೆಂತೆ ಮಹಿಳೆಯರ ಬಿಡುಗಡೆಯಾಯಿತು. ಒತ್ತಾಳಾಗಿದ್ದ ಅತಿಂದ್ರನಾಥ್ ದತ್ತಾನನ್ನು ಮಾವೋವಾದಿಗಳು ಬಿಡುಗಡೆಗೊಳಿಸಿದರು. ಸರಕಾರಕ್ಕೆ ಮುಜುಗರಉಂಟಾಗುವಂತೆ ಅತಿಂದ್ರನಾಥ್ ಮಾವೋವಾದಿಗಳನ್ನು ಖಂಡಿಸದೆ ಮಾತುಕತೆಯಾಡಬೇಕು ಎಂದು ಆಗ್ರಹಿಸಿದರು, ಮಾಧ್ಯಮಗಳ ಮುಖಾಂತರ.
ಈ ಎಲ್ಲಾ ಘಟನೆಗಳ ಕೇಂದ್ರಬಿಂದುವಾಗಿರುವ ಹದಿನಾಲ್ಕು ಮಹಿಳೆಯರು ಯಾರು? ಇವರೆಲ್ಲರನ್ನು ತೆಶಬಂದ್ ಹಳ್ಳಿಯ ಸುತ್ತಮುತ್ತಲಿಂದ ಸೆಪ್ಟೆಂಬರ್ ೩ರದು ಬಂಧಿಸಲಾಗಿತ್ತು. ಸೆ. ೨ರನ್ದು ಮಧುಪುರಿಯಲ್ಲಿ ರಾಜ್ಯದ ಪಡೆಗಳು ಆದಿವಾಸಿಗಳ ಪ್ರತಿಭಟನಾ ಮೆರವಣಿಗೆಯ ( ಪ್ರತಿಭಟನೆ ಮಹಿಳೆಯೊಬ್ಬಳ ಮೇಲೆ ನಡೆಸಿದ ಅತ್ಯಾಚಾರದ ವಿರುಧ್ಧ) ಗುಂಡಿನ ಮಳೆಗರೆದಿದ್ದರು.
ಅತಿಂದ್ರನಾಥ್ ದತ್ತಾನ 'ಸ್ವಾತಂತ್ರ್ಯಕ್ಕೆ' ಬದಲಿಗೆ ಬಿಡುಗಡೆಯಾದ ಮಹಿಳೆಯರ ಮೇಲಿದ್ದ ಆರೋಪ - ಮಾರಕಾಸ್ತ್ರಗಳಿಂದ ದೊಂಬಿ, ಹತ್ಯಾ ಯತ್ನ, ರಾಷ್ಟ್ರದ ವಿರುಧ್ಧ ಯುಧ್ಧ ಸಾರುವಿಕೆ, ಯುಧ್ಧಕ್ಕಾಗಿ ಹಣ ಸಂಗ್ರಹಿಸುವಿಕೆ, ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರ ಸಂಗ್ರಹ - ಎಲ್ಲವು ಜಾಮೀನುರಹಿತ ಅಪರಾಧಗಳು. ಎಲ್ಲವನ್ನು ಸರಕಾರ ಹಿಂದಕ್ಕೆ ಪಡೆದಿರುವುದು ಅವರ ಬಿಡುಗಡೆಯಿಂದ ಖಚಿತಗೊಂಡಿದೆ.
ಅ ಮಹಿಳೆಯರಲ್ಲಿ ಒಬ್ಬಳಾದ ಶುಭಾರಾಣಿ ಬಾಸ್ಕೆಯನ್ನು ಈ ಲೇಖಕ ಮಾತನಾಡಿಸಿದ. ಆಕೆ ಹೇಳಿದ್ದು - ಮನೆಯಲ್ಲಿದ್ದಾಗ ಹೊರಗಡೆ ಗಲಾಟೆಯಗುತ್ತಿತ್ತು. ಪೊಲೀಸರು ಕೆಲವು ಮಹಿಳೆಯರನ್ನು ಬಂಧಿಸುತ್ತಿದ್ದರು . ಅದೇನೆಂದು ವಿಚಾರಿಸುವ ಸಲುವಾಗಿ ಬಾಸ್ಕೆ ಹೊರಬಂದಾಗ ' ಸರಕಾರದ ಮೇಲೆ ಯುಧ್ಧ ಸಾರಿದ ಆರೋಪ ಹೊರಿಸಿ ಕಂಥಪಹಾರ್ ಕ್ಯಾಂಪಿಗೆ ಎಳೆದೊಯ್ಯಲಾಯಿತು.
ಇಬ್ಬರು ಮಕ್ಕಳ ತಾಯಿಯಾದ ಪದ್ಮಮೊನಿ ಹೇಳುವಂತೆ ಪೊಲೀಸರು ಮಾವೋವಾದಿಗಳು ಹಳ್ಳಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ನೆಪದಿಂದ ಹಳ್ಳಿ ಪ್ರವೇಶಿಸಲು ಬಂದಾಗ ಊರಿನವರೆಲ್ಲ ತಮ್ಮ ತಮ್ಮ ಕೆಲಸಗಳನ್ನು ಬಿಟ್ಟು ಪೋಲೀಸರನ್ನು ಸುತ್ತುವರೆದರು. ಮಾವೋವಾದಿಗಳನ್ನು ರಕ್ಷಿಸುವ ಸಲುವಾಗಿ ಅಲ್ಲ. ಹಳ್ಳಿಯ ಪ್ರತಿ ಮನೆಗೂ ನುಗ್ಗಿ ಸಿಕ್ಕಿದನ್ನು ಧ್ವಂಸ ಮಾಡುವ, ಲುತಿಗೈಯ್ಯುವ , ಬಡಿಯುವ ಪೋಲಿಸರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು.
ಸುತ್ತಲಿನ ಹಳ್ಳಿಯ ಜನರೂ ತಮ್ಮ ನೆರೆಯವರ ಬೆಂಬಲಕ್ಕೆ ಬಂದರು. ಎಲ್ಲಾ ಮಹಿಳೆಯರನ್ನು ಬಂಧಿಸಿ ಕಂಥಪಹಾರಿ ಠಾಣೆಗೆ ಕರೆದೊಯ್ದರು. ಹೋಗುವಾಗ ಕಂಥಪಹಾರಿ ಬಜಾರಿಗೆ ನಡೆದು ಹೋಗುತ್ತಿದ್ದ ರಾಮದುಲಾಲ್ ಮಂದಿಯನ್ನು ಬಂಧಿಸಿದರು, ಅದೇ ಆರೋಪಗಳೊಂದಿಗೆ. ಆತನು ಈಗ ಬಿಡುಗಡೆ ಆಗಿದ್ದಾನೆ.
ಚಿದಂಬರಂ- ಬುಧ್ಧದೆವರಿಂದ ಯುಧ್ಧಕ್ಕೆ ನುಕಲ್ಪಟ್ಟ ಲಾಲ್ ಗಡದಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸುವುದು ದಿನನಿತ್ಯದ ಮಾತಾಗಿದೆ. ಉಳಿದ ಆದಿವಾಸಿ ಪ್ರದೇಶಗಳಿಗೂ ಇದನ್ನು ವಿಸ್ತರಿಸುವ ವಿಚಾರ ಸರಕಾರಗಳಿಗಿದೆ.
'ಉಳಿದೆಲ್ಲಾ ಹೋರಾಟಗಳು ನಮ್ಮನ್ನು ರಾಜ್ಯ ಪ್ರಾಯೋಜಿತ ಕ್ರೌರ್ಯ ಮತ್ತು ದಮನದಿಂದ ರಕ್ಷಿಸಲು ವಿಫಲವಾದಾಗಲಷ್ಟೇ ನಾವು ಮಾವೋವಾದಿಗಳ ಸಹಾಯ ಪಡೆಯುವ ಬಗ್ಗೆ ಯೋಚಿಸುತ್ತೇವೆ' - ಇದು ಅ ಪ್ರದೇಶದಲ್ಲಿನ ಬಹುತೇಕ ಆದಿವಾಸಿಗಳ ನಿಲುವು. ಮಾವೋವಾದಿಗಳ ಮೇಲೆ ಅವರಿಟ್ಟಿದ್ದ ನಂಬುಗೆ ಮಾವೋವಾದಿಗಳ ಈ ಕಾರ್ಯದಿಂದ ದ್ವಿಗುಣಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ.ಅಮಾಯಕರನ್ನು ಬಂಧಿಸುವ ಸರಕಾರದ ಕ್ರಮಗಳನ್ನು ಮುಂಚಿನಿಂದ ಶಾಂತ ರೀತಿಯ ಚಳುವಳಿಗಳಿಂದ, ಪ್ರತಿಭಟನೆಗಳಿಂದ ಖಂಡಿಸುತ್ತಿದ್ದ ಸಂಘಟನೆಗಳ ಮನವಿಗಳ ಬಗ್ಗೆ ತಿರಸ್ಕಾರವನ್ನೇ ಉತ್ತರವನ್ನಾಗಿ ಕೊಡುತ್ತಿದ್ದ ಸರಕಾರ ಈಗ ಮಾವೋವಾದಿಗಳ ಸಶಸ್ತ್ರ ಹೋರಾಟಕ್ಕೆ, ಅವರ ಬೇಡಿಕೆಗೆ ತಲೆಬಾಗಿರುವುದು ಮಾವೋವಾದಿಗಳ ಭಾಷೆಯಷ್ಟೇ ಈ ಸರಕಾರಕ್ಕೆ ಉತ್ತರ ಕೊಡಬಲ್ಲದು ಎಂಬ ಭಾವನೆಯನ್ನು ಅ ಪ್ರದೇಶದ ಜನರಲ್ಲಿ ಮೂಡಿಸಿದರೆ ಅಚ್ಚರಿಯಿಲ್ಲ.

No comments:

ChatBox

Related Posts with Thumbnails